ಆನೇಕಲ್ ತಾಲೂಕಿನ ಬಿಲ್ಲಾಪುರ ಗ್ರಾಮ ಪಂಚಾಯತ ಪಕ್ಕದಲ್ಲಿರುವ ನ್ಯಾಯಬೆಲೆ ಅಂಗಡಿಗೆ ಬೋಡ್‌೯ವೇ ಇಲ್ಲ. ನ್ಯಾಯಬೆಲೆ ಅಂಗಡಿಗಳಿಗೆ ತನ್ನದೆಯಾದ ನಿಯಮ ಷರತ್ತುಗಳಿವೆ.ಆದರೆ ಬಿಲ್ಲಾಪುರಾ ನ್ಯಾಯಬೆಲೆ ಅಂಗಡಿ ಮಾಲಿಕರು ಆ ನಿಯಮ, ಷರತ್ತುಗಳನ್ನು ಗಾಳಿಗೆ ತೂರಿ, ಮನಬಂದಂತೆ ಪಡಿತರ ವಿತರಣೆ ಮಾಡುತ್ತಿದ್ದಾರೆ. ದಿನಾಂಕ ೦೭-೦೧-೨೦೨೬ ರಂದು ಪಡಿತರ ವಿರಣೆ ಮಾಡುತ್ತಿದ್ದು, ಅದು ಯಾವ ನ್ಯಾಯಬೆಲೆ ಅಂಗಡಿ? ಅದಕ್ಕೆ ಹೆಸರಿಲ್ಲ, ಅಂಗಡಿ ಸಂಖ್ಯೆ ಇಲ್ಲ. ಇವರಿಗೆ ಯಾರೂ ಹೇಳೋರು ಕೇಳೋರು ಇಲ್ಲ ಅನಿಸುತ್ತೆ.
