Home – Gharjane Digital Media Anekal, Bangalore

ಸಂಪಾದಕರು
ಡಿ.ಎನ್.‌ ಐಹೋಳೆ

ಅನಕ್ಷರಸ್ಥ ಸಮಾಜ..!

ಮನುಷ್ಯತ್ವ ಮರೇತ ಮನುಷ್ಯ..! ಮನುಷ್ಯ ಒಂಟಿಯಾಗಿ ಬದುಕಲು ಸಾಧ್ಯವಿಲ್ಲ. ಆದ್ದರಿಂದ ಅವನು ಸಮಾಜ ಮಾಡಿಕೊಂಡು, ಸಮಾಜದಲ್ಲಿಯೇ ಬದುಕುತ್ತಿದ್ದಾನೆ. ಅವನು ಅಕ್ಷರಸ್ಥನಾಗಿ, ಬುದ್ಧಿವಂತನಾದ. ಆದರೆ ಸಮಾಜ ಇನ್ನೂ ಅನಕ್ಷರಸ್ಥವಾಗಿಯೆ ಇದೆ. ತಾನು ಸುಗಮವಾಗಿ ಬದುಕಲು ಅನೇಕ ಧಮ೯, ಮತ, ಪಂಥಗಳು ಮಾಡಿಕೊಂಡು, ಬಣ್ಣ, ಬುದ್ಧಿವಂತಿಕೆ ಮತ್ತು ಕಾಯಕದ ಆಧಾರದ ಮೇಲೆ ಜಾತಿಗಳು, ಗುಂಪುಗಳನ್ನಾಗಿ ಸಮಾಜವನ್ನು ವಿಂಗಡಿಸಿ, ಪ್ರಕೃತಿಯನ್ನು ಹಾಳು ಮಾಡಿ, ತನ್ನ ಸ್ವಾಥ೯ಕ್ಕಾಗಿ ಹಿಂಸಾತ್ಮಕವಾಗಿ ಬದುಕುತ್ತಿದ್ದಾನೆ. ತನ್ನ ಅನೂಕುಲಕ್ಕಾಗಿ ಲೆಕ್ಕಕ್ಕಿಲ್ಲದಷ್ಟು ನೀತಿ, ನಿಯಮಗಳನ್ನು ಮಾಡಿಕೊಂಡು, ಕಾನೂನು ಎಂಬ ಹೆಸರಿಟ್ಟು ಅದನ್ನು ತನ್ನ ಕ್ರೂರತನವನ್ನು ಮುಚ್ಚಿಡಲು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾನೆ. ಮನುಷ್ಯ ಹುಟ್ಟುತ್ತಲೇ ಜಗಳಗಂಟಿ. ಇವನು ತಾನೂ ಸುಮ್ಮನಿರಲ್ಲ, ಇನ್ನೊಬ್ಬರನ್ನು ಸುಮ್ಮನಿರಕ್ಕೆ ಬಿಡಲ್ಲ. ತನ್ನ ಐಶ್ಯಾರಾಮಿ ಜೀವನಕ್ಕಾಗಿ ಪ್ರಕೃತಿಯ ವಿರುದ್ಧವಾಗಿ ಕಾಡು, ವನ್ಯ ಜೀವಿಗಳನ್ನು ಹಾಳು ಮಾಡಿ ಇಲ್ಲಸಲ್ಲದ ರೋಗರುಜಿನಗಳಿಗೆ ಬಲಿಯಾಗಿ ತನ್ನ ಸಾವನ್ನು ತಾನೇ ತಂದುಕೊಂಡಿದ್ದಾನೆ. ಒಂದು ಧಮ೯ದವರು ಇನ್ನೊಂದು ಧಮ೯ದವರನ್ನು ಕಂಡರೆ ಆಗಲ್ಲ, ಒಂದು ಜಾತಿಯವರು ಇನ್ನೊಂದು ಜಾತಿಯವರನ್ನು ಕಂಡರೆ ಆಗಲ್ಲ. ಚಂದ್ರನ ಮೇಲೆ ಮನೆ ಕಟ್ಟುವ ಕನಸು ಹೊತ್ತವರು ಒಂದುಕಡೆಯಾದರೇ, ಇನ್ನೊಂದುಕಡೆ ನಂದು ನಿಂದು ಅಂತ ಯಾವಾಗಲೂ ಕಿತ್ತಾಡುತ್ತಲೇ ಇರತಾರೆ. ಪ್ರೀತಿ, ಪ್ರೇಮ ಅಂತ ಬದುಕುವ ಜನ ಇನೊಂದುಕಡೆ. ಪ್ರೀತಿ ಎಂದರೆ ಮಾನಸೀಕ ಅನಾರೋಗ್ಯಕ್ಕೆ ಕೊಟ್ಟ ಆಮಂತ್ರಣ. ಪ್ರೀತಿಯೂ ಮಾನಸೀಕ ಮತ್ತು ಶಾರೀರಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಪ್ರೀತಿಸುವವರನ್ನು ಯಾವತ್ತು ಒಂದಾಗೊಕ್ಕೆ ಬಿಟ್ಟಿಲ್ಲ, ಬಿಡೋದು ಇಲ್ಲ ನಮ್ಮ ಈ ಸಮಾಜ. ಏಕೆಂದರೆ ನಮ್ಮ ಸಮಾಜ ಬೇರೆ ಬೇರೆ ಧಮ೯, ಮತ, ಪಂಥಗಳಿಂದ ಕೂಡಿದ್ದು, ಇಲ್ಲಿ ಪ್ರತಿಯೊಬ್ಬ ವ್ಯಕ್ತಿಯ ವಿಚಾರಗಳು ವಿಭಿನ್ನವಾಗಿವೆ. ಒಂದು ಧಮ೯, ಮತ, ಪಂಥದವರು ಬೇರೆ ಧಮ೯, ಮತ, ಪಂಥದವರನ್ನು ಪ್ರೀತಿಸುವುದು ಒಂದು ಶಿಕ್ಷಾಹ೯ ಅಪರಾಧ, ಮಹಾಪಾಪ ಅಂತಾನೇ ಪರಿಗಣಿಸುತ್ತದೆ ನಮ್ಮ ಈ ಅನಕ್ಷರಸ್ಥ ಸಮಾಜ.

ಹೀರ್‌ ರಾಂಝಾ, ಲೈಲಾ ಮಜ್ನು ಇವರನ್ನು ಅಮರ ಪ್ರೇಮಿಗಳೆಂದು ಈ ಪ್ರಪಂಚ ಹೊಗಳುತ್ತದೆ. ಇವರು ಬದುಕಿದ್ದಾಗ ಇವರನ್ನು ಒಂದಾಗೊಕ್ಕೆ ಬಿಟ್ಟಿಲ್ಲ ನಮ್ಮ ಈ ಸಮಾಜ. ಕೊನೆಗೆ ಇವರು ವಿಷ ಸೇವಿಸಿ ಪ್ರಾಣ ಬಿಟ್ಟವರು. ಅವರು ಸತ್ತ ಮೇಲೆ ಅವರನ್ನು ಅಮರ ಪ್ರೇಮಿಗಳೆಂದು ಪೂಜಿಸುತ್ತದೆ ನಮ್ಮ ಈ ಅನಕ್ಷರಸ್ಥ ಸಮಾಜ.