ಆನೇಕಲ್‌ ತಾಲೂಕಿನ ದೊಮ್ಮಸಂದ್ರ ಗ್ರಾಮ ಪಂಚಾಯತ ಕಾಯಾ೯ಲಯ ಒಂದು ಅದ್ಭುತ ಅಂತ ಹೇಳಬಹುದು. ಪಂಚಾಯತ ದ್ವಾರ ಬಾಗಿಲು ನೋಡಿದಾಗ ಎಲ್ಲರೂ ಅಂದುಕೊಳ್ಳೋದು ಇವತ್ತು ಪಂಚಾಯತ ರಜೆ ಇದೆ ಅಂತ. ಪಂಚಾಯತ ಕಾಯಾ೯ಲಯದ ಪಕ್ಕದಲ್ಲಿ ಬಾಪೂಜಿ ಸೇವಾ ಕೇಂದ್ರ ಇದೆ. ಅಲ್ಲೇ ಆ ” ಗುಪ್ತ ದ್ವಾರ ” ಇರೋದು, ಬಾಪೂಜಿ ಸೇವಾ ಕೇಂದ್ರದ ಒಳಗಡೆಯಿಂದ ಪಂಚಾಯತಗೆ ಹೋಗುವ ದಾರಿ ಇದೆ ಅಂತ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಯಾದ ಜ್ಯೋತಿ ಜೆ.ಆರ್‌ ಅವರೆ ನಮಗೆ ಸ್ಪಷ್ಠನೆ ನೀಡಿದ್ದು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ತಮ್ಮ ಕಾಯಾ೯ಲಯದ ಬಾಗಿಲು ಯಾಕೆ ದುರಸ್ತಿ ಮಾಡಿಸುತ್ತಿಲ್ಲವೋ ಮತ್ತು ಇದು ಯಾಕೆ ಹೀಗೆ ಅಂತ ಅಭಿವೃದ್ಧಿ ಅಧಿಕಾರಿಗಳೇ ಹೇಳಬೇಕು. ಹಗರಣಗಳು ಸುಲಭವಾಗಿ ಮಾಡಬಹುದಂತ ನಮ್ಮ ಅನಿಸಿಕೆ ಅಷ್ಟೆ. ದೊಮ್ಮಸಂದ್ರವನ್ನು ಸ್ವಚ್ಛವಾಗಿ ಇಡುವುದಕ್ಕೆ ” ಇಲ್ಲಿ ಕಸವನ್ನು ಎಸೆದರೆ ರೂ.೫೦೦ ರಿಂದ ರೂ.೫೦೦೦ ರವರೆಗೆ ದಂಡ ವಿಧಿಸಲಾಗುವುದು ಅಂತ ದೊಮ್ಮಸಂದ್ರದಲ್ಲೆಲ್ಲ ಬ್ಯಾನರ್‌ಗಳು ಕಟ್ಟಿದ್ದಾರೆ. ಆದರೆ ಅದರ ಬಗ್ಗೆ ಇವರಿಗೆ ಗಮನ ಇಲ್ಲ, ಅದು ಕಾಯ೯ರೂಪಕ್ಕೆ ಬಂದಿಲ್ಲ. ಜನ ಪಂಚಾಯತ ಕಾಯಾ೯ಲಯದ ಎದುರುಗಡೆನೇ ಕಸ ಎಸೆಯುತ್ತಿದ್ದರೂ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ನಿದ್ರೆಯಲ್ಲಿದ್ದಾರೆ.

0
0

By admin

Leave a Reply

Your email address will not be published. Required fields are marked *

Optimized by Optimole
Verified by MonsterInsights