ಆನೇಕಲ್ ತಾಲೂಕಿನ ಅತ್ತಿಬೆಲೆ ಹೋಬಳಿಯಲ್ಲಿ ಲಂಚ ಪಡೆದು ಒಟ್ಟು ವಾಷಿಕ ಆದಾಯ ಕೇವಲ 1.2 ಲಕ್ಷಗಳು ಮಾತ್ರ ಅಂತ ಆದಾಯ ಪ್ರಮಾಣ ಪತ್ರಗಳನ್ನು ಅನುಮೋದನೆ ನೀಡಲಾಗುತ್ತಿದೆ. ಬೆಂಗಳೂರಿನ ಆನೇಕಲ್ ತಾಲೂಕಿನ ಬೊಮ್ಮಸಂದ್ರ, ಜಿಗಳಿ, ಇಗ್ಗಲೂರು, ಚಂದಾಪೂರ ಇವು ಕೈಗಾರಿಕಾ ಪ್ರದೇಶಗಳಾಗಿದ್ದು, ಕನಾ೯ಟಕ ಕನಿಷ್ಠ ವೇತನ ಕಾಯ್ದೆಯ 2025ರ ಅಧಿಸೂಚನೆಯ ಪ್ರಕಾರ ಕನಿಷ್ಠ ವೇತನ 17 ಸಾವಿರಕ್ಕೆ ಮೇಲ್ಪಟ್ಟಿದ್ದು, ಆದರೂ ಕೂಡ ಅತ್ತಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ಶೇಕಡಾ 75ರಷ್ಟು ಆದಾಯ ಪ್ರಮಾಣ ಪತ್ರಗಳನ್ನು ಒಟ್ಟು ವಾಷಿ೯ಕ ಆದಾಯ ಕೇವಲ 1.2 ಲಕ್ಷ ಅಂತ ವಿತರಿಸಲಾಗುತ್ತಿದೆ. ಆದಾಯ ಪ್ರಮಾಣ ಪತ್ರ ಹೊಂದುವವರು ಖಾಸಗಿ ಕಂಪನಿಗಳಲ್ಲಿ ಕಾಯನಿವಹಿಸುತ್ತಿದ್ದರೂ ಕೂಡ ಅವರ ಒಟ್ಟು ವಾಷಿ೯ಕ ಆದಾಯ ಕೇವಲ 1.2 ಲಕ್ಷ ಅಂತ ಆದಾಯ ಪ್ರಮಾಣ ಪತ್ರ ಕೇವಲ ಒಟ್ಟು ವಾಷಿ೯ಕ ಆದಾಯ 1.2 ಅಂತ ವಿತರಿಸಲಾಗುತಿದೆ. ಇದರಿಂದ ನೈಜ ಬಡ ಕುಟುಂಬಗಳಿಗೆ ವಂಚನೆಯಾಗುತ್ತಿದೆ. 1.2 ವಾಷಿ೯ಕ ಆದಾಯ ಹೊಂದಿದವರ ಮಕ್ಕಳು ಚಂದಾಪೂರದ ಸ್ವಾಮಿ ವಿವೇಕಾನಂದ ಖಾಸಗಿ ಕಾಲೇಜಿನಲ್ಲಿ ಲಕ್ಷ ಲಕ್ಷ ಫೀಜು ಕಟ್ಟಿ ವ್ಯಾಸಂಗ ಮಾಡುತ್ತಿದ್ದಾರೆ. ವಾಷಿ೯ಕ ಆದಾಯ ಕೇವಲ 1.2 ಲಕ್ಷ ಆಗೋದಾದರೆ ಕಾಲೇಜ್ ಫೀಜ್ಗೆ ಹಣ ಎಲ್ಲಿಂದ ಬತಾ೯ಯಿದೆ..? ಸರಕಾರದ ಎಲ್ಲ ಲಾಭದಾಯಕ ಯೋಜನೆಗಳು ಶ್ರೀಮಂತರ ಬಾಗಿಲು ತಟ್ಟುತ್ತಿವೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳಾದ ಗ್ರಾಮ ಲೆಕ್ಕಿಗರು, ಕಂದಾಯ ನಿರೀಕ್ಷಕರು ಮತ್ತು ತಹಶೀಲ್ದಾರರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಇದೇ ರೀತಿ ಮುಂದುವರೆದರೆ ಬಡವರು ಸರಕಾರಿ ಯೋಜನೆಗಳಿಂದ ಹೊರ ಉಳಿಯಬೇಕಾಗುತ್ತದೆ. ಆನೇಕಲ್ ತಾಲೂಕಿನಲ್ಲಿ ಕನ್ನಡಿಗರನ್ನು ಹುಡುಕುವ ಪರಿಸ್ಥಿತಿ ಉಂಟಾಗಿದೆ. ತಾಲೂಕಿನಲ್ಲಿ ಕೇವಲ 25%ರಷ್ಟು ಮಾತ್ರ ಕನ್ನಡ ಮಾತನಾಡುವವರು ಸಿಗುತ್ತಾರೆ. 50%ರಷ್ಟು ತಮೀಳು, 20% ತೆಲುಗು ಮತ್ತು 5%ರಷ್ಟು ಹಿಂದಿ ಮಾತನಾಡುವವರಿದ್ದಾರೆ. ಇದು ಕನ್ನಡಿಗರಿಗೆ ಚಪ್ಪಲಿ ಏಟಿಗಿಂತ ಕಡಿಮೆ ಇಲ್ಲ.