ಪಿ.ಡಿ.ಒ ಜ್ಯೋತಿ ಜೆ.ಆರ್.

ದೊಮ್ಮಸಂದ್ರ ಗ್ರಾಮ ಪಂಚಾಯತ್‌ ಅಭಿವೃದ್ಧಿ ಅಧಿಕಾರಿಯಾದ ಜ್ಯೋತಿ ಜೆ.ಆರ್‌ ಯಾರದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ. ಇವರು ದೊಮ್ಮಸಂದ್ರ ಗ್ರಾಮ ಪಂಚಾಯಿತಿ ಸ್ವಚ್ಛ ಅಭಿಯಾನ ನಡೆಸುವ ನೆಪದಲ್ಲಿ ಗ್ರಾಮ ಪಂಚಾಯತಿಯ ದುಡ್ಡು ಹಾಳು ಮಾಡುತ್ತಿದ್ದಾರೆ. ದೊಮ್ಮಸಂದ್ರ ಗ್ರಾಮ ಪಂಚಾಯಿತಿ ಸ್ವಚ್ಛ ಅಭಿಯಾನ ಇಲ್ಲಿ ಕಸವನ್ನು ಹಾಕಿದವರಿಗೆ ರೂ.500 ರಿಂದ ರೂ.5000 ರವರೆಗೆ ದಂಡ ಮತ್ತು ಕಾನೂನು ಶಿಕ್ಷೆಗೆ ಗುರಿಪಡಿಸಲಾಗುವುದು ಅಂತ ಬ್ಯಾನರ್‌ಗಳನ್ನು ಮುದ್ರಿಸಿ ದೊಮ್ಮಸಂದ್ರದಲ್ಲೆಲ್ಲ ತೂಗು ಹಾಕಲಾಗಿದೆ. ಆದರೆ ದೊಮ್ಮಸಂದ್ರ ಗ್ರಾಮ ಪಂಚಾಯತ ಎದುರುಗಡೆನೇ ಬ್ಯಾನರ್‌ ಕಟ್ಟಿರುವ ಕೆಳಗಡೆನೆ ಪ್ಲಾಸ್ಟಿಕ್‌ಗಳಲ್ಲಿ ಕಸವನ್ನು ತುಂಬಿ ಎಸೆಯಲಾಗಿದೆ. ಆದರೆ ಪಿ.ಡಿ.ಒ ಮತ್ತು ಸಿಬ್ಬಂದಿಗಳು ನಿದ್ದೆ ಮಾಡುತ್ತಿದ್ದಾರೆ ಅನಿಸುತ್ತೆ. ಕೇವಲ ಬ್ಯಾನರ್‌ಗಳನ್ನು ತೂಗಿ ಹಾಕಿದರೆ ದೊಮ್ಮಸಂದ್ರ ಸ್ವಚ್ಚವಾಗಲ್ಲ. ಇವರು ಪಂಚಾಯಿತಿ ದುಡ್ಡಿನಿಂದ ಬ್ಯಾನರ್‌ ಮುದ್ರಿತರಿಗೆ ಲಾಭ ಮಾಡುತ್ತಿದ್ದಾರೆಯೇ ವಿನಃ ಯಾವೂದೇ ಸ್ವಚ್ಚತೆಯೆ ಕೆಲಸ ಮಾಡುತ್ತಿಲ್ಲ. ಇವರು ಯಾರದೋ ದುಡ್ಡಲ್ಲಿ ಯಲ್ಲಮ್ಮನ ಜಾತ್ರೆ ಮಾಡುತ್ತಿದ್ದಾರೆ. ಪಂಚಾಯಿತಿ ಎದುಗಡೆ ಸುಮಾರು 30ಕ್ಕೂ ಹೆಚ್ಚು ಪ್ಲಾಸ್ಟಿಕ್‌ ಮೂಟೆಗಳನ್ನು ಎಸೆಯಲಾಗಿದ್ದು, ಪ್ರತಿ ಮನೆಯಿಂದ ಎರಡು ಮೂಟೆ ಅಂತ ಲೆಕ್ಕ ಹಾಕಿದ್ರೂ ಒಬ್ಬರಿಗೆ ತಲಾ ರೂ.5,000/- ರಂತೆ ರೂ.75,000 ಆಗುತ್ತೆ. ಆದ್ದರಿಂದ ಜಿಲ್ಲಾ ಪಂಚಾಯತ ಮುಖ್ಯ ಕಾಯ೯ನಿವಾ೯ಹಕ ಅಧಿಕಾರಿಗಳು ರೂ.25,000ಗಳು ರಿಯಾಯಿತಿ ನೀಡಿ ರೂ.50,000/-ಗಳು ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ಜ್ಯೋತಿ ಜೆ.ಆರ್‌ ಅವರಿಗೆ ದಂಡ ವಿಧಿಸಿ ಅವರ ವೇತನದಲ್ಲಿ ದಂಡ ಭರಿಸಿಕೊಳ್ಳಬೇಕು.

0
0

By admin

Leave a Reply

Your email address will not be published. Required fields are marked *

Optimized by Optimole
Verified by MonsterInsights