ದಿನಾಂಕ 23 ನವೆಂಬರ್ 2025 ರಂದು ಬೆಂಗಳೂರಿನ ಆನೆಕಲ್ ತಾಲೂಕಿನ ಹೀಲಾಲಿಗೆ ಗ್ರಾಮದಲ್ಲಿ ಬೆಳಿಗ್ಗೆ ಕ್ರಿಕೇಟ್ ಆಡಲು ಹೋದ ಕಿರಣ್ ಕುಮಾರ್ (22) ಆಟ ಆಡುತ್ತಲೇ ಬಿದ್ದು ಸಾವನ್ನಪ್ಪಿದ್ದು ಅನುಮಾನಾಸ್ಪದವಾಗಿದೆ. ಬೊಮ್ಮಸಂದ್ರದಲ್ಲಿರುವ ನಾರಾಯಣ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ಸೇರಿಸಲಾಗಿತ್ತು. ಆದರೆ ಕಿರಣ್ ಕುಮಾರ್ ಆಸ್ಪತ್ರೆಗೆ ಸೇರಿಸುವ ಮೋದಲೇ ವಿಧಿವಶವಾಗಿದ್ದರು ಅಂತ ಹೇಳಲಾಗುತ್ತಿದೆ. ಬೆಂಗಳೂರಿನ ಚಂದಾಪೂರ ವ್ಯಾಪ್ತಿಯಲ್ಲಿರುವ ಸುಯ೯ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಂಚನಾಮೆ ಹಾಗೂ ಪೋಸ್ಟ್ ಮಾಟ೯ಮ್ ಬಳಿಕ ಅಂತ್ಯ ಕ್ರೀಯೆಗೆ ಶವ ಕೊಡಲಾಗುತ್ತದೆ ಅಂತ ಮೂಲಗಳಿಂದ ತಿಳಿದು ಬಂದಿದೆ. ಏಪ್ರೀಲ್ 30, 2025 ರಂದು ಬಸವ ಜಯಂತಿ ದಿನ ಇವರ ನಿಶ್ಛಿತಾಥ೯ ಮಾಡಲಾಗಿತ್ತು. ಇವರ ತಂದೆ-ತಾಯಿ ಸಹ ಕುಟುಂಬ ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದಿದ್ದು, ಮಗನ ಸಾವಿನಿಂದ ತಂದೆ-ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ದಿನಾಂಕ 24-11-2025 ರಂದು ಇವರ ಮೂಲ ನಿವಾಸವಾದ ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲೂಕಿನ ಬಂದರವಾಡ ಗ್ರಾಮದಲ್ಲಿ ಕ್ರೀಯೆ ನಡೆಸಲಾಗುವುದು.