ಆನೇಕಲ್: ಬೊಮ್ಮಸಂದ್ರ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿರುವ ಅರಿಸ್ಟೋ ಕಂಪನಿಯಲ್ಲಿ ಕನ್ನಡಿಗರಿಗೆ ಕೀಳಾಗಿ ಕಾಣಲಾಗುತ್ತಿದೆ. ಇಲ್ಲಿ ಕನ್ನಡಿಗರಿಗೆ ಮಾತ್ರ ಕನಾ೯ಟಕ ಕನಿಷ್ಠ ವೇತನ ಅಧಿಸೂಚನೆಗಿಂತ ಕಡಿಮೆ ವೇತನ ಕೊಡುತ್ತಿದ್ದು, ಈ ಕಂಪನಿಯಲ್ಲಿ ಆಸ್ಸಾಂ, ಬಿಹಾರ ಮತ್ತು ತಮಿಳಿಗರಿಗೆ ಹೆಲ್ಪರ್ ಕೆಲಸಕ್ಕೆ 23,000 ರಿಂದ 27,000 ವೇತನ ಕೊಡುತ್ತಿದ್ದು, ಕನ್ನಡಿಗರಿಗೆ ಕೇವಲ 14,000 ರಿಂದ 16,000 ಮಾತ್ರ ವೇತನ ನೀಡಲಾಗುತ್ತಿದೆ. ಇದರಲ್ಲಿ ಆಸ್ಸಾಂ, ಬಿಹಾರ ಮತ್ತು ತಮೀಳಿನಿಂದ ಬಂದ ಕಾಮಿ೯ಕರಲ್ಲಿ ಎಷ್ಟೋ ಜನಗಳ ಹತ್ತಿರ 10ನೇ ತರಗತಿಯ ಹಾಗೂ ಐ.ಟಿ.ಐ ಪ್ರಮಾಣ ಪತ್ರಗಳು ಇಲ್ಲ. ಆದರೂ ಅವರಿಗೆ 18,000ಕ್ಕೂ ಮೆಲ್ಪಟ್ಟ ವೇತನ ನೀಡಲಾಗುತ್ತಿದೆ. ಅರಿಸ್ಟೋದಲ್ಲಿ ಕ್ಯಾಬಿನೆಟ್ರಿ ವಿಭಾಗದಲ್ಲಿರುವ ಮ್ಯಾನೇಜರ್ ರಂಗನಾಥ, ಸುಜಿತ್ ಮತ್ತು ಬಬಲು ಈ ಮೂರು ಜನ ಸೇರಿ ಕನ್ನಡಿಗರಿಗೆ ಕೆಲಸ ಮಾಡದಂತೆ ಮಾನಸೀಕ ಹಿಂಸೆ ಕೊಡುತ್ತಿದ್ದಾರೆ. ರಂಗನಾಥ ಎಂಬ ಕರಿ ಹೆಗ್ಣ ಕನ್ನಡ ಮಾತನಾಡಬೇಡಿ, ಹಿಂದಿ ಕಲಿಯಿರಿ ಅಂತ ಕಿರುಕುಳ ಕೊಡುತ್ತಿದ್ದು, ಹಿಂದಿ ಮಾತನಾಡಲು ಬರದಿದ್ದರೆ ಇಲ್ಲದ ಸಲ್ಲದ ನೆಪ ಒಡ್ಡಿ, ಕೆಲಸದಿಂದ ತೆಗೆದು ಹಾಕುವ ಬೆದರಿಕೆ ಕೊಡುತ್ತಾನೆ. ಬಿಹಾರದ ಕೆಲ ಹಿಂದಿ ಹುಡುಗರು ನಕಲಿ ಪ್ರಮಾಣ ಪತ್ರಗಳು ಮಾಡಿಸಿ ಕೆಲಸಕ್ಕೆ ಸೇರಿರುವ ಶಂಕೆ ಇದೆ.