ಕರ ವಸೂಲಿ ವಿಫಲ! ಮಲ್ಲಾಬಾದ ಗ್ರಾಮ ಪಂಚಾಯತ
ಅಫಜಲಪೂರ ತಾಲೂಕಿನ ಮಲ್ಲಾಬಾದ ಗ್ರಾಮ ಪಂಚಾಯತ ಕರ ವಸೂಲಿಯನ್ನು ನಿಲ೯ಕ್ಷಿಸುತ್ತಿದೆ. ಅಫಜಲಪೂರದ ಹಲವು ಪಿ.ಡಿ.ಒ.ಗಳಿಗೆ ಅಭಿವೃದ್ಧಿಯ ಅಥ೯ನೇ ಗೊತ್ತಿಲ್ಲ. ಮಲ್ಲಾಬಾದನಲ್ಲಿ ರೂ.15,94,627.68/- ಮಾತೋಳಿಯಲ್ಲಿ ರೂ.6,30,377.47/- ಮತ್ತು ಚಿಂಚೋಳಿಯಲ್ಲಿ ರೂ.16,65,966.78/-ಗಳು ಹೀಗೆ ಒಟ್ಟು ರೂ.41,90,971.93/-ಗಳು ಕರ ವಸೂಲಿ ಮಾಡುವುದು ಬಾಕಿ ಇದೆ. ಮಲ್ಲಾಬಾದ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಮಲ್ಲಾಬಾದ, ಮಾತೋಳಿ ಮತ್ತು ಚಿಂಚೋಳಿ ಸೇರಿದಂತೆ ಮೂಲ ಸೌಕಯ್ಯ೯ಗಳಿಲ್ಲ. ಬಚ್ಚಲ ನೀರು, ಮಳೆ ನೀರು ಹೋಗುವುದಕ್ಕೆ ನಾಲಿ, ಚರಂಡಿಗಳಿಲ್ಲ. ಕುಡಿಯುವುದಕ್ಕೆ ನೀರಿಲ್ಲ, ಬೀದಿ ದೀಪಗಳಿಲ್ಲ. 2022-23 ರಲ್ಲಿ “ಹರ್ ಘರ್ ಜಲ್” ಯೋಜನೆ ಅಡಿಯಲ್ಲಿ ಮನೆ ಮನೆಗೆ ನಲ್ಲಿಗಳು ಕೂಡಿಸಲಾಗಿದೆ ಆದರೆ ಇಲ್ಲಿಯವರೆಗೆ ಒಂದು ಹನಿ ನೀರಿಲ್ಲ. ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ಶೌಚಾಲಯಗಳ ನಿಮಾ೯ದಲ್ಲಿ ಭ್ರಷ್ಟಾಚಾರ ನಡೆದಿದೆ. ಪ್ರತಿ ಮನೆಗೂ ಶೌಚಾಲಯಗಳು ಮಂಜೂರು ಆದರೂ ಕೂಡ ಇನ್ನೂ ಹೆಣ್ಣು ಮಕ್ಕಳು ಬಹಿದೆ೯ಸೆಗೆ ಹೋಗುವುದು ತಪ್ಪಿಲ್ಲ. ಮಲ್ಲಾಬಾದ ಗ್ರಾಮ ಪಂಚಾಯತ ಪಿ.ಡಿ.ಒ.ಗಳಾದ ಶ್ರೀಮತಿ ಪಾವ೯ತಿ ಅವರು ಪಂಚಾಯತ ಅಭಿವೃದ್ಧಿ ಅಧಿಕಾರಿಯಾಗಿ ಕಾಯ೯ನಿವ೯ಹಿಸುವುದಕ್ಕೆ ಅಸಮಥ೯ರು.
