ಅನಕ್ಷರಸ್ಥ ಅಧಿಕಾರಿಗಳು! ಸಮಾಜ ಕಲ್ಯಾಣ ಇಲಾಖೆ ಅಫಜಲಪೂರ
ದಿನಾಂಕ 29-09-2026 ರಂದು ವ್ಯವಸ್ಥಾಪಕರು ಸಮಾಜ ಕಲ್ಯಾಣ ಇಲಾಖೆ ಅಫಜಲಪೂರ ಇವರಿಗೆ ಮಾಹಿತಿ ಹಕ್ಕು ಕಾಯ್ದೆ 2005ರ ಅಡಿಯಲ್ಲಿ ಸಮೂದಾಯ ಭವನಗಳ ಕುರಿತು ಮಾಹಿತಿ ಕೇಳಲಾಗಿತ್ತು. ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಮಾಹಿತಿ ಪಡೆಯಲು ಬಿ.ಪಿ.ಎಲ್. ಪಡಿತರ ಚೀಟಿ ಲಗತ್ತಿಸಿ ಉಚಿತ ಮಾಹಿತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಮಾಹಿತಿ ಹಕ್ಕು ಅಜಿ೯ಯೊಂದಿಗೆ ಬಿ.ಪಿ.ಎಲ್. ಪಡಿತರ ಚೀಟಿ ಲಗತ್ತಿಸಿರುವುದರಿಂದ ರೂ.10/-ಪೋಸ್ಟಲ್ ಆಡ೯ರ್ ಲಗತ್ತಿಸಿಲ್ಲವೆಂಬ ಕಾರಣ ನೀಡಿ, ಅಫಜಲಪೂರ ಸಮಾಜ ಕಲ್ಯಾಣ ಇಲಾಖೆಯ ಭೂಪ ಮಾಹಿತಿ ನೀಡಲು ತಿರಸ್ಕರಿಸಿದ್ದಾರೆ.
