ಉದ್ಯೋಗ ಖಾತ್ರೀ ಯೋಜನೆ ಮಣ್ಣುಪಾಲು ! ಚೌಡಾಪೂರ ಗ್ರಾಮ ಪಂಚಾಯತ
ಚೌಡಾಪೂರ ಗ್ರಾಮ ಪಂಚಾಯತವು ಉದ್ಯೋಗ ಖಾತ್ರಿಗೆ ಪ್ರತಿ ಬಾರಿ ಒಂದೇ ಜಾಗ ಫಿಕ್ಸ್ ಮಾಡುತ್ತಿದೆ. ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಪ್ರತಿ ಬಾರಿ ಚೌಡಾಪೂರದ ಹಳ್ಳದಲ್ಲಿ ಉದ್ಯೋಗ ಖಾತ್ರಿ ಕಾಮಗಾರಿ ನಡೆಸುತ್ತಿದೆ. ಈ ಕಾಮಗಾರಿಯಿಂದ ಯಾವೂದೇ ಪ್ರಯೋಜನೆ ಇಲ್ಲ. ಚೌಡಾಪೂರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಮಣ್ಣಲ್ಲಿ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದಾರೆ.
