ವಸತಿ ಯೋಜನೆ ಹರಾಜು..! ಗ್ರಾಮ ಪಂಚಾಯತ ಮಲ್ಲಾಬಾದ
ಅಫಜಲಪೂರ: ಮಲ್ಲಾಬಾದ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಚಿಂಚೋಳಿ ಗ್ರಾಮದಲ್ಲಿ ಒಟ್ಟು 33 ಮನೆಗಳು ಮಂಜೂರು ಆಗಿವೆ. ಮಂಜೂರು ಆದ ಮನೆಗಳ ಫಲಾನುಭವಿಗಳು ಈಗಾಗಲೇ ಪಕ್ಕಾ ಮನೆಗಳು ಹೊಂದಿದ್ದಾರೆ. ಒಟ್ಟು ಫಲಾನುಭವಿಗಳಲ್ಲಿ ಕೆಲವರು ಎರಡು ಅಂತಸ್ತೀನ ಮನೆ ಹೊಂದಿದ್ದರೇ, ಇನ್ನೂ ಕೆಲವರು ಬಡ್ಡಿ ಧಂದೆಯಲ್ಲಿ ತೊಡಗಿದ್ದಾರೆ. ಮಲ್ಲಾಬಾದ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ವಸತಿ ಯೋಜನೇಯ ಎಲ್ಲಾ ನಿಯಮ, ಷರತ್ತುಗಳನ್ನು ಗಾಳಿಗೆ ತೂರಿ ಸೂಮಾರು ಇಪ್ಪತ್ತು ಫಲಾನುಭವಿಗಳ ಜಿ.ಪಿ.ಎಸ್. ಮಾಡಲಾಗಿದೆ. ಚಿಂಚೋಳಿ ಗ್ರಾಮದ ನಿವಾಸಿಯಾದ ಶ್ರೀಮತಿ ಚಂದ್ರಭಾಗಾ ಗಂಡ ನರಸಪ್ಪ ಮಾಂಗ (62) ಇವರು ಕಚ್ಚಾ ಮನೆಯಲ್ಲಿಯೇ ವಾಸಿಸುತ್ತಿದ್ದು, 15 ವಷ೯ಗಳಿಂದ ಇವರಿಗೆ ಯಾವೂದೇ ವಸತಿ ಯೋಜನೆ ಅಡಿಯಲ್ಲಿ ಮನೆ ಮಂಜೂರು ಆಗಿಲ್ಲ. ಭ್ರಷ್ಠ ಅಧಿಕಾರಿಗಳಿಗೆ ದುಡ್ಡೇ.. ದೊಡ್ಡಪ್ಪ..!
