ಆನೇಕಲ್‌ ತಾಲೂಕಿನ ಬೊಮ್ಮಸಂದ್ರದಲ್ಲಿ ನಕಲಿ ಮತದಾರರು ಪತ್ತೆಯಾಗಿದ್ದು, ಅದರಲ್ಲಿ ಮತದಾರರ ಸಂಬಂಧಿಕರ ಹೆಸರುಗಳೇ ಇಲ್ಲ. ಕೆಲವು ಮತದಾರರ ಹೆಸರು ಮತ್ತು ಸಂಬಂಧಿಕರ ಹೆಸರು ಒಂದೇ ಇದ್ದು, ಅವುಗಳು ನಕಲಿ ಹಾಗೂ ಬಾಂಗ್ಲಾ ವಲಸಿಗರಿಗೆ ಮಾಡಿಕೊಟ್ಟ ಮತದಾರರ ಚೀಟಿಗಳು ಇರುವ ಶಂಕೆ ಇದೆ. ಬೊಮ್ಮಸಂದ್ರ ಗ್ರಾಮದಲ್ಲಿ ನಕಲಿ ಮತದಾರರನ್ನು ಸೃಷ್ಟೀಸಲಾಗಿದೆ. ಮತದಾರರ ಹೆಸರು ಮತ್ತು ಮತದಾರರ ಸಂಬಂಧಿಕರ ಹೆಸರು ಒಂದಕ್ಕೊಂದು ಸಂಬಂಧನೇ ಇಲ್ಲ. ಮತದಾರರ ಹೆಸರು ಸುರೇಶ್ ಇದ್ರೆ, ಸಂಬಂಧಿಕರ ಹೆಸರು ಟಿ, ಪಿ, ಬಿ, ಜಿ, ಸಿ ಅಂತ ಇದೆ. ಬೆಂಗಳೂರಿನ (ನಗರ) ಆನೇಕಲ್ ತಾಲೂಕ, ಜಿಗಣಿ, ಬೊಮ್ಮಸಂದ್ರ ಸೇರಿದಂತೆ 1000ಕ್ಕೂ ಹೆಚ್ಚು ನಕಲಿ ಮತದಾರರು ಇರುವ ಶಂಕೆ ಇದೆ. ಏಕೆಂದರೆ ಇದರಲ್ಲಿ ಹೊರರಾಜ್ಯದ ಮತ್ತು ಬಾಂಗ್ಲಾ ದೇಶದವರು ಇರುವ ಸಾಧ್ಯತೆ ಇದೆ. ನಕಲಿ ಮತದಾರರ ಚೀಟಿಗಳನ್ನು ಇಟ್ಟುಕೊಂಡು ಆಧಾರ್‌ ಕಾಡ್‌೯ ತಿದ್ದುಪಡಿಮಾಡಿಕೊಂಡು ಸರಕಾರದಿಂದ ಲಾಭದಾಯಕ ಯೋಜನೆಗಳಾದ ಸ್ತ್ರೀ ಶಕ್ತಿ (ಉಚಿತ ಬಸ್‌ ಪ್ರಯಾಣ), ಗೃಹ ಲಕ್ಷ್ಮೀ ಯೋಜನೆ ಹೀಗೆ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ನಕಲಿ ಮತದಾರರ ಹೆಸರಿನಲ್ಲಿ ಪಡಿತರ ಚೀಟಿಗಳೂ ಇದ್ದರೆ ಅವೂಗಳನ್ನು ಸಹಿತ ರದ್ದುಮಾಡಬೇಕು. ಏಕೆಂದರೆ ಇದರಿಂದ ನೈಜ ಫಲಾನುಭವಿಗಳಾದ ಕನ್ನಡಿಗರಿಗೆ ಅನ್ಯಾಯ, ಮೋಸ, ವಂಚನೆಯಾಗುತ್ತಿದೆ.

0
0

By admin

Leave a Reply

Your email address will not be published. Required fields are marked *

Verified by MonsterInsights