ಹಣವಿದ್ರೆ.. ಹೆಣಕ್ಕೂ ಅಂಗವೈಕಲ್ಯ ಪ್ರಮಾಣ ಪತ್ರ ನೀಡಲು ಸಿದ್ಧ..!

ಕಲಬುರಗಿ ಜಿಲ್ಲೆಯ ಅಫಜಲಪೂರ ಕಂದಾಯ ಇಲಾಖೆಯಲ್ಲಿ ಅಕ್ರಮ ಅಂಗ ವಿಕಲ ಪಿಂಚಣಿ ಮಂಜೂರು ಮಾಡಲಾಗುತ್ತಿದೆ. ತಹಸೀಲ್ದಾರ್‌ ಕಾಯಾ೯ಲಯದಲ್ಲಿ ಅಧಿಕಾರಿಗಳಿಂತ ದಲ್ಲಾಳಿ, ಮಧ್ಯವತಿ೯ಗಳ ಸಂಖ್ಯೆ ಜಾಸ್ತಿ ಇದೆ. ದಲ್ಲಾಳಿಗಳು ವೃದ್ಧಾಪ್ಯ ವೇತನ, ಅಂಗವೈಕಲ್ಯ ಪಿಂಚಣಿ ಮಾಡಿಸಿಕೊಡಲು ರೂ.5-6 ಸಾವಿರ ಸುಲಿಗೆ ಮಾಡುತ್ತಿದ್ದಾರೆ. ಇದರಲ್ಲಿ ಚಿಂಚೋಳಿ ಗ್ರಾಮ ಲೆಕ್ಕಿಗರು ಮತ್ತು ಕಂದಾಯ ನಿರೀಕ್ಷಕರು ಶಾಮಿಲಾಗಿದ್ದಾರೆ. ಮಲ್ಲಾಬಾದ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಮಲ್ಲಾಬಾದ ಗ್ರಾಮದಲ್ಲಿ 243, ಮಾತೋಳಿಯಲ್ಲಿ 40 ಮತ್ತು ಚಿಂಚೋಳಿಯಲ್ಲಿ 99 ಅಂಗವಿಕಲ ಪಿಂಚಣಿದಾರರು ಪತ್ತೆಯಾಗಿದ್ದು, ಚಿಂಚೋಳಿ ನೈಜ ಅಂಗವಿಕಲರು 25-30 ಜನ ಮಾತ್ರ ಇದ್ದು 99 ಪ್ಪೈಕಿ 60ಕ್ಕೂ ಮೇಲ್ಪಟ್ಟು ನಕಲಿ ಅಂಗವಿಕಲ ಪಿಂಚಣಿ ಪಡೆಯುತ್ತಿದ್ದಾರೆ.

0
0

By admin

Leave a Reply

Your email address will not be published. Required fields are marked *

Verified by MonsterInsights