filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 35;

ದಿನಾಂಕ 10-11-2025, ಮದ್ಯಾಹ್ನ 12:30 ರ ಹೊತ್ತಿಗೆ ಆನೇಕಲ್‌ ತಾಲೂಕಿನ ತಹಸೀಲ್ದಾರರವರಿಗೆ ಮನವಿ ಮಾಡಿಕೊಳ್ಳುತ್ತಿರುವ ಸಂದಭ೯ದಲ್ಲಿ ಕನಾ೯ಟಕ ದಲೀತ ಸಂಘಷ೯ ಸಮಿತಿಯ ಜಿಲ್ಲಾ ಸಂಚಾಲಕರಾದ ಶ್ರೀ ದಶರಥ್‌ ಮಾರಗೊಂಡನಹಳ್ಳಿಯವರು ಮಾತನಾಡಿ ” ದೇಶದಲ್ಲಿ ಕೋಮು ಗಲಭೆ ಸೃಷ್ಟಿಸಿ ಜನರನ್ನು ದಂ೯ದ ಆಧಾರದ ಮೇಲೆ ವಿಭಜನೆ ಮಾಡಿ ಬ್ರಾಹ್ಮಣವಾದಿ ಅಧಿಕಾರವನ್ನು ನಿರಂತರವಾಗಿ ಅನುಭವಿಸಲು ಆರ್‌. ಎಸ್.‌ಎಸ್.‌ ಕುತಂತ್ರ ನಡೆಸುತ್ತಿದೆ, ೧೯೫೦ರ ದಶಕದಲ್ಲಿಯೇ ಢ. ಬಿ.ಆರ್.‌ ಅಂಬೇಡ್ಕರ್‌ರವರು ಆರ್.‌ಎಸ್.‌ಎಸ್.‌ ಮತ್ತು ವಿಶ್ವ ಹಿಂದೂ ಮಹಾಸಭಾಗಳಂತಹ ಸಂಘಟನೆಗಳೋಂದಿಗೆ ಹೊಂದಾಣಿಕೆ ಮಾಡಿಕೊಳ್ಳಬಾರದೆಂದು, ರಾಜಕೀಯ ಪರಿಶಿಷ್ಟ ಜಾತಿಗಳ ಪ್ರಣಾಳ್ವಿಕೆಯಲ್ಲಿ ಎಚ್ಚರಿಕೆ ಕೊಟ್ಟಿದ್ದರು. ಅಷ್ಟೇ ಅಲ್ಲ.. ಆರ್.‌ಎಸ್.‌ಎಸ್.‌ ಒಂದು ಅಪಾಯಕಾರಿ ಸಂಘಟನೆ ಎಂದು ಘೋಷಿಸಿದರು. ಭಾರತ ಸಂವಿಧಾನದ ಮೇಲೆ ಯುದ್ಧ ಸಾರಿರುವ ಆರ್.‌ಎಸ್.‌ಎಸ್.‌ರವರ ಆಟ ಅತೀರೇಕವಾಗಿದೆ. ಇತ್ತಿಚಿಗೆ ಆರ್.ಎಸ್.‌ಎಸ್.‌ ಕಾನೂನು ಬಾಹಿರವಾಗಿ, ಮುಂಗಡ ಅನುಮತಿ ತೆಗೆದುಕೊಳ್ಳದೇ ೧೦೦ ವಷ೯ ಸಂಭ್ರಮಾಚರಣೆ ಮಾಡಿಕೊಳ್ಳುತ್ತಿದ್ದು, ಚಾತುವ೯ಣ೯ ಭಾರತವನ್ನು ಕಟ್ಟಲು ಹೊರಟ ಸಂಘ ಪರಿವಾರದ ಹಗಲುಗನಸು ಹುಸಿಯಾಗಿಸಿ ಪ್ರಬುದ್ಧ ಭಾರತವನ್ನು ಕಟ್ಟೋಣ ಅಂತ ಕರೆಕೊಟ್ಟರು. ಈ ಸಂದಭ೯ದಲ್ಲಿ ರಾಜ್ಯ ಸಮಿತಿ ಸದಸ್ಯರಾದ ಶ್ರೀ ಶ್ರೀರಾಮ್‌ ಜಿಗಳ, ಬಿ.ಬಿ.ಎಮ್.‌ಪಿ. ಸಂಚಾಲಕರಾದ ಮಾವಳ್ಳಿ ವೆಂಕಟೇಶ್‌, ಆನೇಕಲ್‌ ತಾಲೂಕಾ ಸಂಘಟನಾ ಚಾಲಕರಾದ ಸುರೇಶ್‌ ಪ್ರಬುದ್ಧ ಮತ್ತು ಆನೇಕಲ್‌, ತಾಲೂಕಾ ಸಮಿತಿಯ ಸದಸ್ಯರಾದ ಶಿವು ಅರೆನೂರು ಮತ್ತು ಗೋಪಾಲ್‌ ಸೋಲೂರು ಉಪಸ್ಥೀತರಿದ್ದರು.

1
0

By admin

Leave a Reply

Your email address will not be published. Required fields are marked *

Verified by MonsterInsights