ಬೆಂಗಳೂರಿನ ಆನೇಕಲ್‌ ಮತಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಬೊಮ್ಮಸಂದ್ರ ಗ್ರಾಮದಲ್ಲಿ ನಕಲಿ ಮತದಾರರನ್ನು ಸೃಷ್ಟೀಸಲಾಗಿದೆ. ಮತದಾರರ ಹೆಸರು ಮತ್ತು ಮತದಾರರ ಸಂಬಂಧಿಕರ ಹೆಸರು ಒಂದಕ್ಕೊಂದು ಸಂಬಂಧನೇ ಇಲ್ಲ. ಮತದಾರರ ಹೆಸರು ಸುರೇಸ್‌ ಇದ್ರೆ, ಸಂಬಂಧಿಕರ ಹೆಸರು ಟಿ, ಪಿ, ಬಿ, ಜಿ, ಸಿ ಅಂತ ಇದೆ. ಬೆಂಗಳೂರಿನ (ನಗರ) ಆನೇಕಲ ತಾಲೂಕ, ಜಿಗಣಿ, ಬೊಮ್ಮಸಂದ್ರ ಸೇರಿದಂತೆ ೧೦೦೦ಕ್ಕೂ ಹೆಚ್ಚು ನಕಲಿ ಮತದಾರರು ಇರುವ ಶಂಕೆ ಇದೆ. ಆದ್ದರಿಂದ ಆನೇಕಲ್‌ ತಾಲೂಕಿನ ತಹಸೀಲ್ದಾರರಾದ ಶ್ರೀ ಶ್ರೀಧರ್‌ ಮಾಡ್ಯಾಳ್‌ರವರು ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಂಡು ನಕಲಿ ಮತದಾರರ ಚುನಾವಣಾ ಚೀಟಿಗಳನ್ನು ರದ್ದುಮಾಡಬೇಕು. ಏಕೆಂದರೆ ಇದರಲ್ಲಿ ಹೊರರಾಜ್ಯದ ಮತ್ತು ಬಾಂಗ್ಲಾ ದೇಶದವರು ಇರುವ ಸಾಧ್ಯತೆ ಇದೆ. ನಕಲಿ ಮತದಾರರ ಚೀಟಿಗಳನ್ನು ಇಟ್ಟುಕೊಂಡು ಆಧಾರ್‌ ಕಾಡ್‌೯ ತಿದ್ದುಪಡಿಮಾಡಿಕೊಂಡು ಸರಕಾರದಿಂದ ಲಾಭದಾಯಕ ಯೋಜನೆಗಳಾದ ಸ್ತ್ರೀ ಶಕ್ತಿ (ಉಚಿತ ಬಸ್‌ ಪ್ರಯಾಣ), ಗೃಹ ಲಕ್ಷ್ಮೀ ಯೋಜನೆ ಹೀಗೆ ಹಲವು ಸೌಲಭ್ಯಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆದ್ದರಿಂದ ನಕಲಿ ಮತದಾರರ ಹೆಸರಿನಲ್ಲಿ ಪಡಿತರ ಚೀಟಿಗಳೂ ಇದ್ದರೆ ಅವೂಗಳನ್ನು ಸಹಿತ ರದ್ದುಮಾಡಬೇಕು. ಏಕೆಂದರೆ ಇದರಿಂದ ನೈಜ ಫಲಾನುಭವಿಗಳಾದ ಕನ್ನಡಿಗರಿಗೆ ಅನ್ಯಾಯ, ಮೋಸ, ವಂಚನೆಯಾಗುತ್ತಿದೆ.

1
0
Verified by MonsterInsights