ಚಿಂಚೋಳಿಯ ಸಮಸ್ಯೆಗಳು ಬಗೆಹರಿಸದಿದ್ದರೆ ಪಂಚಾಯತಿಗೆ ಬೀಗ: ಮಾಹಾಂತೇಶ ಜಮಾದಾರ
ಅಫಜಲಪೂರ: ಮಲ್ಲಾಬಾದ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿರುವ ಚಿಂಚೋಳಿ ಗ್ರಾಮವು ವ್ಯವಸ್ಥಿತ ಚರಂಡಿಗಳು, ದಾರಿ ದೀಪಗಳು. ಕುಡಿಯುವ ಮತ್ತು ಬಳಸುವ ನೀರು ಹಾಗೂ ಇನ್ನಿತರ ಸಮಸ್ಯೆಗಳಿಂದ ಕೂಡಿದ್ದು, ಕೆಲವೇ ದಿನಗಳ ಮುಂಚೆ ದಾರಿ ದೀಪ ದುರಸ್ತಿ ಮಾಡಲಾಗಿತ್ತು. ಬಿಲ್ ಕಲೇಕ್ಟರ್ಗಳು ಕೆಳ ಮಟ್ಟದ ಬಲ್ಬ್ಗಳು ಬಳಸುತ್ತಿರುವುದರಿಂದ ವಿದ್ಯೂತ್ ಕಂಬಗಳಿಗೆ ಹಾಕಿದ ಕೆಲವೇ ದಿನಗಳಲ್ಲಿ ಬಲ್ಬ್ಗಳು ಕೆಟ್ಟು ಹೋಗುತ್ತಿವೆ. ಮುಂಬರುವ ದಿನಗಳಲ್ಲಿ ಎಲ್ಲ ಸಮಸ್ಯೆಗಳು ಇತ್ಯಥ೯ವಾಗದಿದ್ದರೆ ಗ್ರಾಮ ಪಂಚಾಯತಗೆ ಬೀಗ ಹಾಕಿ ಹೋರಾಟ ಮಾಡಲಾಗುವುದೆಂದು ಕನಾ೯ಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಲಬುರಗಿ ಜಿಲ್ಲಾಧ್ಯಕ್ಷರಾದ ಶ್ರೀ ಮಹಾಂತೇಶ್ ಜಮಾದಾರರವರು ಪಂಚಾಯತ ಅಭಿವೃದ್ಧಿ ಅಧಿಕಾರಿಯಾದ ಶ್ರೀಮತಿ ಪಾವ೯ತಿ ಅವರಿಗೆ ಎಚ್ಚರಿಕೆ ಪತ್ರ ನೀಡಲಾಗುವುದೆಂದು ತಿಳಿಸಿದ್ದಾರೆ.
